Search This Blog

Monday, December 14, 2015

ಒಳ್ಳೆಯ ನುಡಿಮುತ್ತುಗಳು

     1.      ಬದುಕೊಂದು ದೊರಕಿತ್ತು ಇನ್ಯಾರಿಗೊ ಬೆಳಕಾಗಲೆಂದು,ಆದರೆ  ಸಮಯ ಸರಿದು ಹೋಗುತ್ತಿದೆ ಕಾಗದದ ತುಂಡು ಗಳಿಸುವುದರಲ್ಲೆ. ಇಷ್ಟು ಹಣ ಪೇರಿಸಿ ಮಾಡುವುದೇನು? ಕೋನೆ ದಿರಿಸಿನಲ್ಲಿ ಜೇಬಿಲ್ಲ ಮಸನದಲ್ಲಿ ತಿಜೋರಿ ಇಲ್ಲ. ಇನ್ನು ಯಮನ ದೂತರೋ ಲಂಚ ಮುಟ್ಟುವುದಿಲ್ಲ

    2.     ನೀವು ಹುಟ್ಟುವಾಗ ಏನೂ ಇರಲಿಲ್ಲ,ಆದ್ರೆ ಸಾಯುವಾಗ ನಿಮ್ಮ ಹೆಸರನಿಂದ ಸಾಯುತ್ತಿರಿ ನಿಮ್ಮ ಹೆಸರು ಕೇವಲ ಅಕ್ಷರಗಳಿಂದ ಮಾತ್ರ ಆಗಿದ್ದರೆ ಸಾಲದು ಅದರಲ್ಲಿ ಒಂದು ಇತಿಹಾಸ ಇರಬೇಕು.

    3.     ಆಕಳು ತನ್ನ ಹಾಲನ್ನು ತಾನು ಕುಡಿಯುವುದಿಲ್ಲ.ಮರ ತನ್ನ ನೆರಳನ್ನು ತಾನು ಅನುಭವಿಸುವದಿಲ್ಲ.ಜೀವನವೆಂದರೆ ನಮಗಾಗಿ ಬದುಕುವುದಲ್ಲ,ಬೇರೆಯವರಿಗಾಗಿಯೂ ಬದುಕಬೇಕು.ಅದುವೇ ಜೀವನ

    4.     ಬೀಜ ಸಂಪೂರ್ಣವಾಗಿ ಯಾವಾಗ ತನ್ನನ್ನೇ ಮಣ್ಣಲ್ಲಿ ಕಳೆದುಕೊಳ್ಳುತ್ತದೋ ಆಗ ಮಾತ್ರ.ಅದು ಕುಡಿಯಿಟ್ಟು ಒಂದು ಮರವಾಗುತ್ತದೆ

    5.     ಯಾರಿಗೆ ಅಗತ್ಯಗಳೇ ಇರುವುದಿಲ್ಲವೋ ಅವರು ಮಾತ್ರ ಶ್ರೀಮಂತರಾಗಿರುತ್ತಾರೆ

    6.     ನಾನಾ ಸಾವುಗಳ ಸತ್ತು ಬದುಕುವುದೇ ಜೀವನ

    7.     ಬಾರದು ಬಪ್ಪದು,ಬಪ್ಪದು ತಪ್ಪದು ಸರ್ವಜ್ಞ

    8.     ಹೃದಯವೇ,ನಿನ್ನಲ್ಲಿ ಯಾರಾದರೂ ಬಂದು ಆತ್ಮವೂ ಶರೀರದ ಹಾಗೆಯೇ ನಶಿಸುತ್ತದೆ ಎಂದು ಹೇಳಿದರೆ ನಿನ್ನ ಉತ್ತರ      ಹೀಗಿರಲಿ;ಹೂವು ನಶ್ವರ,ಆದರೆ ಬೀಜ ಎಂದಿಗೂ ಶಾಶ್ವತ

    9.     3 ದಿನದ ಸಂತಿ,ಸುಮನ್ಯಾಕ ಕುಂತಿ ಬಿಡಬೇಕ ಸಂಸಾರದ ಭ್ರಾಂತಿ,ನಿನ್ನೊಬ ಅತಿಥಿ ಮಾಡ್ತಾರೆ ತಿಥಿ,ಬಾರೋ           ಸದ್ಗುರುವಿನ ಜೋತಿ

    10.      ಕಟ್ಟಿಡಬೇಡ ಬುತ್ತಿ ನಾಳಿಗೆ ಇಟ್ಟು ಬಂದು ತಿಂತಾರ ಹೋಳಿಗಿ,ಬೀಳದಿರು ಸಂಸಾರದ ಜೋಲಿಗಿ ಕಳಿತಾರ ಕಿಮ್ಮತು ಹುಚ್ಚು ಪ್ಯಾಲಿಗಿ

    11.    ಕಾಲಲಿ ಕಟ್ಟಿದ ಗುಂಡು,ಕೊರಳಲಿ ಕಟ್ಟಿದ ಬೆಂಡು!ತೇಲಲೀಯದು ಗುಂಡು, ಮುಳುಗಲೀಯದು ಬೆಂಡು!ಇಂತಪ್ಪ ಸಂಸಾರಶರಧಿಯ ದಾಂಟಿಸಿ ಕಾಲಾಂತಕನೇ ಕಾಯೋ, ಕೂಡಲಸಂಗಯ್ಯ!

     12.     ಸಾವೆಂದರೆ ಏಕೆ ಭಯ? ಉತ್ತರ:ಸಾಯಲು ಯಾರಿಗೂ ಭಯ ಇರುವುದಿಲ್ಲ.ಆದರೆ ಬಿಟ್ಟು ಹೋಗಬೇಕೆಂದೇ ಪ್ರತಿಯೊಬ್ಬರಿಗೂ ಭಯ ಬರುವುದು.

     13.    ದೃಶ್ಯ ವಸ್ತುಗಳನ್ನು ನೆನೆಯುವುದೇ ಬಂಧನ,ಮರೆಯುವುದೇ ಮುಕ್ತಿ.

14.     ಯಾರೋ ನಿಮಗಾಗಿ ಎಷ್ಟು ಹೊತ್ತಾದರೂ ಕಾಯಲು

ಸಿದ್ದರಿದ್ದಾರೆ ಎಂತಾದರೆ
ಅವರಿಗೆ ಮಾಡಲು ಬೇರೆ ಏನೂ ಕೆಲಸವಿಲ್ಲ ಎಂದರ್ಥವಲ್ಲ.
ಅವರ ದೃಷ್ಟಿಯಲ್ಲಿ ನಿಮಗಿಂತ
ಮಹತ್ವದ್ದು ಬೇರೇನೂ ಇಲ್ಲ ಎಂದರ್ಥ


    15.    ನಿನ್ನೊಡವೆ ಎಂಬುದು ಜ್ಞಾನರತ್ನ ನೋಡಾ.ಅದನ್ನು ನೀನು ಎಡೆಬಿಡದೆ ಅಲಂಕರಿಸಿಯಾದೊಡೆ,ನಮ್ಮ ಗುಹೇಶ್ವರಲಿಂಗದಲ್ಲಿ ನಿನ್ನಂಥ ಸಿರಿವಂತರಿಲ್ಲ ನೋಡಾ ಎಲೇ ಮನವೇ

     16.     ಚಟ ಇದ್ದವ ಚಟ್ಟಕ್ಕೇರಿದ, ಚಟ ಬಿಟ್ಟವ ಪಟ್ಟಕ್ಕೇರಿದ

     17.     ಮಸಸ್ಸಿನಲ್ಲಿ ಆಗುವ ಕಂಪನಗಳು ಭೂ-ಕಂಪನಗಳಿಗಿಂತಲೂ ಭಯಾನಕವಾಗಿರುತ್ತವೆ.

     18.     ನೀವು ಸುಂದರವಾಗಿದರೆ ಅದು ನಿಮ್ಮ ತಂದೆ ತಾಯಿ ಉಡುಗೊರೆ.ನೀವು ನಿಮ್ಮ ಜೀವನವನ್ನು ಸುಂದರಮಾಡಿಕೊಂಡರೆ ಅದು ನೀವು ನಿಮ್ಮ ತಂದೆ ತಾಯಿಗೆ ಕೊಡುವ ಉಡುಗೊರೆ.

     19.    ಅಗಲುವುದು ಸಗುಣಧರ್ಮ,ಅಗಲಲಾರದೆ ಅಖಂಡ ಕೂಡಿಕೊಂಡಿರುವುದು ನಿರ್ಗುಣಧರ್ಮ.ಅಗಲುವುದು ಸುಗುಣ ಐಕ್ಯವಾಗಿರುವುದು ನಿರ್ಗುಣಧರ್ಮ.

     20.   ಕಳೆದು ಹೋದದ್ದನ್ನು ಎಷ್ಟು ಸಲ ಚಿಂತಿಸಿದರೂ ಏನೂ ಪ್ರಯೋಜನವಿಲ್ಲ.ಅದು ನಮ್ಮದ್ದಾಗಿದರೆ ತಾನಾಗೇ ನಮ್ಮ ಹತ್ತಿರ ಬರುತ್ತದೆ.ನಮ್ಮದಲ್ಲದಿದ್ದರೆ ಯಾವತ್ತಿದ್ದರೂ ನಮ್ಮಲ್ಲಿ ಉಳಿಯುವುದಿಲ್ಲ.ನಮ್ಮಲ್ಲಿ ಏನೂ ಇರಬೇಕೊ ಅದು ಇದ್ದೇ ಇರುತ್ತದೆ.ಏನು ಇರಬಾರದೊ ಅದು ಬಿಟ್ಟು ಹೋಗುತ್ತದೆ. ಫಿಲಾಸಪಿ ನಮಗೆ ನಂಬಿಕೆ  ಇಲ್ಲದಿದ್ದರೂ  ಇದನ್ನು ನಂಬುವುದು ಒಳ್ಳೆಯದು.ಏಕೆಂದರೆ ಇದರಿಂದ ನೆಮ್ಮದಿ ಸಿಗುತ್ತದೆ.

     21.   ನೀವು ಹೊಂದಿರುವ ಆಸ್ತಿ ಮತ್ತು ವಸ್ತುಗಳಿಗಿಂತ ನೀವು ದೊಡ್ಡವರು.ಅವು ನಿಮಗಾಗಿವೆ,ನೀವು ಅವುಗಳಿಗಲ್ಲ ಎಂಬುದು ಗಮನವಿರಲಿ.

     22.    ಮನವು ಪಾಪದ ಮೂಲ,ತನುವು ರೋಗದ ಮೂಲ,ದಿನವು ಕಾಲದ ಮೂಲ ಚಿಂತಿಸೂ ಮನುಜ

     23.    ಸಹನೆ ಶಾಂತಿಯನ್ನು ಹೆಚ್ಚಿಸುತ್ತದೆ.ತ್ಯಾಗ ಯೋಗವನ್ನು ಹೆಚ್ಚಿಸುತ್ತದೆ,ಭೋಗ ರೋಗವನ್ನು ಹೆಚ್ಚಿಸುತ್ತದೆ.ಭಯ ಭಯವನ್ನು ಹೆಚ್ಚಿಸುತ್ತದೆ.

     24.    ಬಯಸಿದ್ದೆಲ್ಲಾ ಸಿಗುವಂತಿದರೆ ಬಯೆಕೆಗೆ ಬೆಲೆ ಇರುತ್ತಿರಲ್ಲ.ಅನಿಸಿದ್ದೆಲ್ಲಾ ಹೇಳುವಂತಿದ್ದರೆ ಮೌನಕ್ಕೆ ಅರ್ಥ ಇರುತ್ತಿರಲಿಲ್ಲ.ತಪ್ಪುಗಳೆ ಆಗದಿದ್ದರೆ ಹೊಸ ಪ್ರೆಯೆತ್ನ ಪಡುತ್ತಿರಲಿಲ್ಲ.ಕಣ್ಣೀರೆ ಬರದಿದ್ದರೆ ನಗುವಿನ ಆನಂದ ತಿಳಿಯುತ್ತಿರಲಿಲ್ಲ.
25.                        ಹಣವನ್ನು ಆಜಿ೯ಸಲೆಂದು ಮಾತ್ರವೇ

ಜೀವಿಸುತ್ತಿರುವುದು ಕತ್ತೆ ಕಾಗದಗಳನ್ನು ತಿಂದು ಜೀವಿಸುವುದಕ್ಕೆ ಸಮ. ಸಂಸಾರವನ್ನು
ಸಾಗಿಸಲೆಂದೇ ಜೀವಿಸುತ್ತಿರುವುದು ಕತ್ತೆ
ಮೂಟೆಯನ್ನು ಹೊತ್ತುಕೊಂಡು
ಹೋಗುತ್ತಿರುವುದಕ್ಕೆ ಸಮ.


26.                        ಜೀವವನವೆಂದರೆ ತೀವ್ರ

ಸಂಕಿರ್ಣವಾದದ್ದು.ಅದರಲ್ಲಿ ಬರುವ
ಕೆಲವು ಪ್ತಶ್ನೆಗಳಿಗೆ ಉತ್ತರಗಳನ್ನು
ಕಂಡುತೊಳ್ಳಲು ಹೋಗಲೇಬಾರದು.ಏಕೆಂದರೆ ಅವುಗಳಿಗೆ ಉತ್ತರಗಳನ್ನು
ಹುಡುಕುವಷ್ಟರಲ್ಲಿ ಪ್ತಶ್ನೆಗಳೇ
ಬದಲಾಗಿರುತ್ತವೆ.ಹೀಗಾಗಿ
ಕೆಲವೊಂದು ಬಾರಿ ಜೀವನವನ್ಪು
ಬಂದಂತೆ ಎದುರಿಸಬೇಕಾಗುತ್ತದೆ.



      27.    ಕಷ್ಣಗಳು ಎದುರಾಗದಿದ್ದರೆ ಜೀವನದ ಮೌಲ್ಯ ಗೊತಾಗುತ್ತಿರಲಿಲ್ಲ.

      28.     ಪ್ರತಿಯೊಬ್ಬನು ಇಬ್ಬರು ಸ್ತ್ರೀಯರನ್ನು ಪ್ರೀತಿಸುತ್ತಾನೆ,ಒಬ್ಬಳು ಅವನ ಕಲ್ಪನೆಯ ಸೃಷ್ಟಿ,ಇನ್ನೊಬ್ಬಳು ಹುಟ್ಟೆ ಇಲ್ಲ

      29.      ಏನೋ ನಿರ್ಣಹಿಸಿಕೊಂಡು ಏನೋ ಮಾಡುತ್ತೇವೆ ಅಂದುಕೊಳ್ಳುತ್ತೇವೆ.ಆದರೆ ನಿರ್ಣಯಿಸಿವವವರು ನಾವಲ್ಲ

      30.      ಮನುಷ್ಯನ ದುಃಖ ಆತನ ಪ್ರೇಮದ ತೀವ್ರತೆಯ ಮೇಲೆ ಆಧಾರ ಪಟ್ಟಿರುತ್ತದೆ

      31.   ಬದುಕೆಂದರೆ ಗೊತ್ತಿಲ್ಲದ ಗುರಿಯಿಲ್ಲದ ಹಾದಿಯಲ್ಲಿ ನಮಗೆ ಬೇಕಾದ್ದನ್ನು ಹುಡುಕುತ್ತಾ ಹೋಗುವ ನಿರಂತರ ಪಯಣವಾ? ಹಾಗೆ ಸಾಗುತ್ತಾ ಸಾಗುತ್ತಾ ಸಿಕ್ಕಿದ್ದನ್ನೇ ನಮಗೆ ಬೇಕಾದದ್ದು ಅಂದುಕೊಂಡು ಬಿಡುತ್ತೇವಾ? ಪ್ರೀತಿಯಲ್ಲೂ ಅಷ್ಟೇನಾ?

      32.   ನಾವು ಪ್ರೀತಿಸಿದವರು ಸಿಕ್ಕದೇ ಹೋದಾಗ, ಸಿಕ್ಕವರನ್ನೇ ಪ್ರೀತಿಸುವುದು ರಾಜಿಯಾ? ಅಸಹಾಯಕತೆಯಾ? ಅನಿವಾರ್ಯ ಕರ್ಮವಾ? ವಿಧಿಯಾ? ಅಥವಾ ಬದುಕಿನ ವಿಲಕ್ಷಣ ವರ್ತನೆಗಳಲ್ಲಿ ಅದೂ ಒಂದಾ?"

      33.  ಜನರ ಬವಣೆ ಇದು,ಮುಂದೂಡುವುದು,ತಡೆಹಿಡಿಯುವುದು,ಸಮಯಕ್ಕಾಗಿ ಕಾಯುತ್ತಿರುವುದು

      34.  ಎದ್ದೇಳಿ ಕಾರ್ಯೋನ್ಮುಖರಾಗಿ, ಜೀವನವಾದರೂ ಎಷ್ಟು ಕಾಲ?ನೀವು ಜಗತ್ತಿಗೆ ಬಂದ ಮೇಲೆ ಏನಾದರೂ ಗುರುತನ್ನು ಬಿಟ್ಟು ಹೋಗಿ,ಅದಿಲ್ಲದಿದ್ದರೆ ನಿಮಗೂ ಮರಕಲ್ಲುಗಳಿಗೂ ಏನು ವೆತ್ಯಾಸ?ಅವೂ ಅಸ್ತಿತ್ವಕ್ಕೆ ಬರುತ್ತವೆ,ನಶಿಸಿ ನಿರ್ನಾಮವಾಗುತ್ತವೆ.

      35.   ತಮ್ಮ ಮನೆ ದೊಡ್ಡದೆನ್ನುವವರು ಅದು ಹೊರಬಯಲಿಗಿಂತ ಚಿಕ್ಕದೆನ್ನುವುದನ್ನು ಮರೆತಿರುತ್ತಾರೆ.

      36.   ಸಹನೆ ನಿನ್ನದಾದರೆ ಸಕಲವು ನಿನ್ನದೆ.ವಿನಯವು ನಿನ್ನದಾದರೆ ವಿಜಯವು ನಿನ್ನದೆ

37.                        ಜಗತ್ತಿನಲ್ಲಿ ಬಹುತೇಕ ವಸ್ತುಗಳು ಪೆಟ್ಟು ತಗಲುವುದರಿಂದ ಒಡೆದು

ಚೂರುಚೂರಾಗುತ್ತವೆ.ಆದರೆ ಮಾನವ ಏಕೈಕ ಜೀವಿ ಅವನು
ಜೀವನದಲ್ಲಿ,ಎಷ್ಟು ಹೆಚ್ಚು
ಪೆಟ್ಟು ತಿನ್ನುತ್ತಾನೋ,ಅಷ್ಟೆ ಪರಿಪಕ್ವಗೊಳ್ಳುತ್ತಾನೆ.


      38.   ವಿಕಾಸವೇ ಜೀವನ, ಸಂಕೋಚವೇ ಮರಣ. ಪ್ರೀತಿಯೇ ಜೀವನ,ದ್ವೇಷವೇ ಮರಣ

      39.  ಹೊಗಳಿಕೆಗಿಂತ ಪೆಟ್ಟುಗಳು, ಮನುಷ್ಯನಲ್ಲಿರುವ ಅಂತರಗ್ನಿಯನ್ನು ಹೊರಗೆಡುಹುತ್ತದೆ

      40.  ನೀರು ಹೇಗೆ ಕಮಲ ಪತ್ರವನ್ನು ನೆನೆಯಿಸಲಾರದೋ ಹಾಗೆಯೇ ಕರ್ಮವೂ ನಿಸ್ವಾರ್ಥಿಯ ಮನಸಿನಲ್ಲಿ ಫಲಾಸಕ್ತಿಯನ್ನು ಉಂಟು ಮಾಡಿ ಆತನನ್ನು ಬಂಧಿಸಲಾರದು

      41.  ಸತ್ಕಾರ್ಯಗಳಿಗೆಲ್ಲ ನಮ್ಮನ್ನು ಪವಿತ್ರರನ್ನಾಗಿ,ಪರಿಪೂರ್ಣರನ್ನಾಗಿ ಮಾಡುವ ಶಕ್ತಿ ಇರುತ್ತದೆ.ದಾನ ಕೊಡುವಾತನೇ ಪಡೆಯುವವರಿಗೆ ಕೃತಜ್ಞರಾಗಿರಬೇಕು

      42.   ದೌರ್ಬಲ್ಯಕ್ಕೆ ಮದ್ದು ನಮ್ಮ ದೌರ್ಬಲ್ಯವನ್ನೇ ಕುರಿತು ಯೋಚಿಸುವುದಲ್ಲ,ನಮ್ಮಲ್ಲಿ ಅಡಗಿರುವ ಅನಂತ ಶಕ್ತಿಯ ಕುರಿತು ಚಿಂತಿಸುವುದು

      43. ಪ್ರತಿಯೊಂದು ಕ್ಷಣದಲ್ಲೂ ನಾವೇನಾಗಿರುತ್ತೇವೋ ಅದು ನಮ್ಮ ಮನಸ್ಸಿನ ಮೇಲೆ ಹಿಂದೆ ಅಂಕಿತವಾದ ಒಟ್ಟು ಕುರುಹುಗಳ ಅಥವ ಸಂಸ್ಕಾರಗಳ ಪ್ರತಿಫಲ

      44.  ಹಣ ನಷ್ಟವಾದರೆ ಬಹಳ ಚಿಂತಿಸಬೇಕಿಲ್ಲ.ಅದನ್ನು ಗಳಿಸಬಹುದು. ಆದರೆ ಆರೋಗ್ಯವನ್ನು ಹಾಳು ಮಾಡಿಕೊಂಡರೆ ಅದನ್ನು ಗಳಿಸುವುದು ಕಷ್ಟ.ನೀವು ಗಟ್ಟಿಮುಟ್ಟಾಗಿದ್ದರೆ ಎಷ್ಟು ಬೇಕಾದರೂ ಸಂಪಾದನೆ ಮಾಡಬಹುದು

      45.   ದಿನ ಕೆಟ್ಟ ಘಟನೆ ಅಥವಾ ಪ್ರಸಂಗ ಸಂಭವಿಸಿದರೆ ಅದು ದಿನದ ವಿದ್ಯಮಾನವಷ್ಟೆ.ಅದನ್ನು ಜನ್ಮದ ಘಟನೆ ಎಂದು ಭಾವಿಸಬೇಕಿಲ್ಲ. ದಿನಗಳು ಕೆಟ್ಟದ್ದಿರಬಹುದು.ಆದರೆ ಜೀವನ ಹಾಗಿರುವುದಿಲ್ಲ.

     46.  ಅಂತರಂಗದಲ್ಲಿ ಸ್ವಚ್ಛತೆ,ಸ್ವಂತಿಕೆಗಳನ್ನು ಬೆಳೆಸಿಕೊಳ್ಳದಿದ್ದರೆ ಹೊರಜಗತ್ತಿನ ಗುಲಾಮರಾಗಬೇಕಾಗುತ್ತದೆ.ಶುದ್ಧಿಗೆ ಆದ್ಯತೆಯಿರಲಿ.


     47. ಗುರಿ ಬೆನ್ನತ್ತಿದ್ದ ಹಟಮಾರಿ ತನ್ನ ಗುರಿ ತಲುಪುವಂತಾಗಲು ಇಡೀ ಜಗತ್ತೇ ಸಂಚು ರೂಪಿಸುತ್ತೆ